ಮಂಗಳವಾರ, ಜುಲೈ 13, 2021

 

ಮಾಧಕ ವ್ಯಸನಗಳು

ಸಂತೋಷಕುಮಾರ ಸಾವಳಗಿ 

Interdiction

ನನ್ನ ಪ್ರೀತಿಯ ಸ್ನೇಹಿತರೆ  ಈ ಲೇಖನದಲ್ಲಿ ನಾನು ಯುವಕ ರು ನಮ್ಮ ದೇಶದಲ್ಲಿ ಹೇಗೆ ಮಾಧಕವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ ಎಂಬುವದರ ಬಗ್ಗೆ ಈ ಲೇಖನದಲ್ಲಿ ಉಲ್ಲೆಖಿಸಲಾಗಿದೆ. 



ಇಂದು ನಮ್ಮ ದೇಶದಲ್ಲಿ ಶಿಕ್ಷಣದಲ್ಲಿ ತಂತ್ರ ಜ್ನ್ಯಾನದಲ್ಲಿ ಎಷ್ಟೇ ಮುಂದುವರೆದರೂ ನಮ್ಮ ದೇಶದ ಯುವಕರು ಮಾಧಕ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ಹೆಚ್ಹಾಗಿ ನಗರ ಪ್ರದೇಶ ದಲ್ಲಿನ ಪ್ರತಿಷ್ಟಿತ ಕಾಲೆಜಿನಲ್ಲಿ ಹೆಚ್ಚಾಗಿ ಮಾಧಕ ವ್ಯಸನಗಳಿಗೆ ಬಲಿ ಯಾಗುತ್ತಿದಾರೆ. 


ಮಾಧಕ ವ್ಯಸನಗಳಿಂದ ಆಗುವ ಪರಿಣಾಮಗಳು 

ಮಾಧಕ ವಸ್ತುಗಳು ಕೆಮಿಕಲ್ಗಳಿಂದ ತಯಾರಾಗುತ್ತವೆ ಅವುಗಳು ದೇಹದ ಕಾರ್ಯ ಚಟುವಟಿಕೆಗಳ ಮೇಲೆ ಭೀಕರ ಅಡ್ಡ ಪರಿಣಾಮಗಳು ಬೀರುತ್ತವೆ .

ಡ್ರಗ್ಸ್ ವ್ಯಸನಿಗಳು ಅದರಿಂದ ಸಿಗುವಂತಹ ಉನ್ಮಾನದ(frenzy ) ಮೇಲೆ ಮಾತ್ರ ಅವರು ತುಂಬಾ ಆಕರ್ಷಿತರಾಗುತ್ತಾರೆ. 


ಆದರೆ ಅವರ ವಯಕ್ತಿಕ ಜೀವನ ಮತ್ತು ಪ್ರೊಫ್ಫೆಷನಲ್  

ಜವಾಬ್ದಾರಿಗಳಿಂದ ಪಾರಾಗಲು ಇಷ್ಟಪಡುತ್ತಾರೆ. ಏಕೆಂದರೆ ಅವರು ವ್ಯಸನದ ಮೇಲೆಯೇ ತಮ್ಮ ಎಲ್ಲಾ ಗಮನವನ್ನು ಹರಿಸುತ್ತಾರೆ . ಈ ಮಾಧಕ ವ್ಯಸನವು ಕ್ರಮೇಣವಾಗಿ ಅವರ ಕೆಲಸದ ಮೇಲೆ ಹಾಗು ಅವರ ಆತ್ಮೀಯರ ಮೇಲೆ ಸಂಭಂದಗಳ ಪರಿಣಾಮ ಬೀರುತ್ತವೆ . 


ಮಾದಕ ವಸ್ತುಗಳ ದುರುಪಯೋಗ ಮತ್ತು ವ್ಯಸನದಿಂದ ಉಂಟಾಗುವ ಇನ್ನಿತರ ಸಮಸ್ಯೆಗಳು:

  • ❤ ಮನೋವಿಕೃತಿಗೊಳಪಡುವ ಸಾಧ್ಯತೆ, ಮಾನಸಿಕ ಹಾಗೂ ದೈಹಿಕ ವರ್ತನೆಯ ಮೇಲೆ ಪರಿಣಾಮ ಬೀರುವ ಅಸ್ವಸ್ಥತೆಗಳ ಬೆಳವಣಿಗೆ

  • ❤ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳು: ಲಿವರ್ಗೆ ಹಾನಿ (ಮದ್ಯಪಾನದಿಂದ), ಶ್ವಾಸಕೋಶದ ಕ್ಯಾನ್ಸರ್ (ತಂಬಾಕು ಸೇವನೆಯಿಂದ), ನರಮಂಡಲಗಳಿಗೆ ಹಾನಿ (ಡ್ರಗ್ ಬಳಕೆಯಿಂದ). ಮದ್ಯ ಮತ್ತು ತಂಬಾಕು ವ್ಯಸನಿಗಳಿಗೆ ಕ್ಯಾನ್ಸರ್ ಹಾಗೂ ಇನ್ನಿತರ ಸಾಂಕ್ರಾಮಿಕವಲ್ಲದ ರೋಗಗಳು ಬರುವ ಅಪಾಯ ಹೆಚ್ಚು.

  • ❤ವ್ಯಕ್ತಿಯು ಮದ್ಯ ಹಾಗೂ ತಂಬಾಕು, ಎರಡೂ ವ್ಯಸನಕ್ಕೆ ಒಳಗಾದರೆ ಅವರ ದೇಹದಲ್ಲಿ ವಿಷಕಾರಿ ಅಂಶಗಳು ಹೆಚ್ಚಾಗುವ ಅಪಾಯ ಅಧಿಕ.

    • ❤ಲೈಂಗಿಕತೆಯ ಪ್ರದರ್ಶನ (ವಿಶೇಷವಾಗಿ ಯುವತಿಯರಲ್ಲಿ) ಮತ್ತು ಲೈಂಗಿಕ ರೋಗಗಳ ಹರಡುವಿಕೆಯ ಅಪಾಯ ಹೆಚ್ಚಾಗುತ್ತದೆ.

    • ❤ಡ್ರಗ್ ಗಳನ್ನು ಸೂಜಿಯಿಂದ ಚುಚ್ಚಿಕೊಂಡು ತೆಗೆದುಕೊಳ್ಳುವದರಿಂದ ಕೀವು, ಸೋಂಕು ಮತ್ತು ಇತರ ಸಾಂಕ್ರಾಮಿಕ ರೋಗಗಳಾದ ಎಚ್ಐವಿ/ಏಡ್ಸ್ (HIV/AIDS) ಬರುವ ಸಾಧ್ಯತೆ ಇರುತ್ತದೆ. ಬೇರೆಯವರಿಗೆ ಚುಚ್ಚಿದ ಸೂಜಿಯನ್ನು ಬಳಸುವುದರಿಂದ ಮಾತ್ರವಲ್ಲದೆ, ಕ್ರಿಮಿನಾಶಕದಿಂದ ಸೂಜಿಯನ್ನು ಸ್ವಚ್ಛಗೊಳಿಸದೆ ಒಬ್ಬರೇ ಪದೆ ಪದೆ ಒಂದೇ ಸೂಜಿಯನ್ನು ಬಳಸುವುದರಿಂದಲೂ ಸಾಂಕ್ರಾಮಿಕ ರೋಗಗಳು ಬರಬಹುದು. 

    • ❤ಮಾದಕ ದ್ರವ್ಯಗಳ ಚಟದ ಕಾರಣದಿಂದ ಸಮಾಜದಿಂದ ದೂಷಿತರಾದ ಅಥವಾ ಒಂಟಿತನದ ತೊಂದರೆ ಅನುಭವಿಸುವುದು.

    • ❤ನಿಶೆಯಲ್ಲಿ ತೆಗೆದುಕೊಳ್ಳುವ ಹಾನಿಕಾರಕ ನಿರ್ಣಯ ಮತ್ತು ಅಪಾಯಕಾರಿ ವರ್ತನೆಯ ಕಾರಣಗಳಿಂದ ಅಥವಾ ಚಟಕ್ಕಾಗಿ ಅಕ್ರಮ ಮಾರ್ಗವನ್ನು ಅನುಸರಿಸುವ ನಡುವಳಿಕೆಯಿಂದ ಕಾನೂನಾತ್ಮಕ ಸಮಸ್ಯೆಗಳು ಬರಬಹುದು.





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ